Wednesday, March 5, 2008


1 comment:

ಕುಕೂಊ.. said...

ಪ್ರಿಯ,

ನೀನಿಲ್ಲಿ ಹಾಕಿರುವ ಚಿತ್ರ ನೋಡಿ ನನ್ನಲ್ಲಿ ಹುಟ್ಟಿದ ಕವಿತೆ.
ಬಾಳದಾರಿಯಿಂದ ನನ್ನ ಗುಬ್ಬಚ್ಚಿ ಗೂಡಿಗೆ ಒಮ್ಮೆ ಬಂದು ಹೋಗಿ.

http://baaladaari.blogspot.com/

http://gubbacchi-goodu.blogspot.com/

ಅನಾಮಿಕ ಸ್ನೇಹಿತ
ಕುಮಾರಸ್ವಾಮಿ.

** ಅಂಗನೆ **

ಬೊಗಸೆ ಕಂಗಳ ಅಂಗನೆ
ನಡೆದು ಬಾರೆ ಚಂಗನೆ|
ನೆಟ್ಟೆ ನೋಟವ ಇತ್ತಲೇ
ಒಲವು ಈಗಲೆ ಬಿತ್ತಲೇ|

ಹೊಳೆವ ನಯನದ ನಾರಿಹೇ
ಚೆಲುವೆಲ್ಲ ನಿನ್ನಲ್ಲೇ ಅಡಗಿದೆ|
ತೋರು ಒಮ್ಮೇ ನಸುನಗೆ
ರಚಿಸುವೆ ಕಾವ್ಯವನು ಈಗಲೆ|

ಕೈಯಲ್ಲಿ ತೊಟ್ಟಿರುವೆ ಪಚ್ಚೆಬಳೆ
ನಾದ ಹೊಮ್ಮಿದೆ ಸೊಬಗಿಲೆ|
ಮನವು ನೆಟ್ಟಿತು ನಿನ್ನಲೆ
ನಾನಾದೆ ನಿನ್ನ ಕೈಸೆರೆ|

ಪಕಳೆಗೆನ್ನೆಯ ಚೆಲುವೆಯೆ
ನಗೆಗುಳಿಯು ಸುಳಿದಿದೆ ನಗೆಯಲೆ|
ನಾಜಾರಿ ಬಿದ್ದೆನು ಆಗಲೆ
ತಾವ ಹುಡಿಕಿರುವೆ ನಿನ್ನ ಹೃದಯದಲೆ|

ಕಿವಿಯ ಓಲೆಯ ಕೋಮಲೆ
ಮುಂಗುರುಳೆ ನಿನ್ನಯ ಆಕರ್ಷಣೆ|
ನಿನ್ನ ನೆನಪಲೆ ಕಟ್ಟಿದೆ ಕನಸನೆ
ಮನದಿಂಗಿತ ಹೇಳಿಬಿಡುವೆನು ಈಗಲೆ|

ಕೋಪವೋ ಹುಸಿ ನೋಟವೋ
ಒತ್ತಿ ಬಂದ ಒಲವಿನಾಸೆಯೋ|
ಯಾಕೆ ನೆಟ್ಟ ಈ ಬಿರಿ ನೋಟವು
ನಾ ಕೇಳಲೇ ನಿನ್ನೆದೆಯ ಗುಟ್ಟನು|



** ಕುಕೂಊs...
ಪುಣೆ
27/05/08